ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು
1) ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಶಸ್ತ್ರಾಸ್ತ್ರ ದಂಗೆಯ ಮುಂದಾಳತ್ವವನ್ನು ವಹಿಸಿದ್ದವನು? ( KAS-1999 )
👉 ಕಲ್ಯಾಣಸ್ವಾಮಿ,
2) ಕರ್ನಾಟಕದಲ್ಲಿ ಬ್ರಹ್ಮ ಸಮಾಜದ ಮೊದಲ ಶಾಖೆ ಸ್ಥಾಪಿತವಾದ ಸ್ಥಳ? ( KAS1999 )
👉 ಧಾರವಾಡ
3) ಕರ್ನಾಟಕದ ಬಾರ್ಡೋಲಿ ಎಂದು ಜನಪ್ರಿಯವಾಗಿದ್ದ ಕೇಂದ್ರ?
👉 ಅಂಕೋಲಾ
4) ಮೈಲಾರ ಮಹದೇವಪ್ಪ ಈ ಚಳುವಳಿಯಲ್ಲಿ ಭಾಗವಹಿಸಿದ್ದರು? ( KAS-1999 )
👉 ಉಪ್ಪಿನ ಸತ್ಯಾಗ್ರಹ,
5) ಹಿಂದಿನ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ಚಳವಳಿ ಆರಂಭವಾದದ್ದು? ( KAS-1999 )
👉 1947ರಲ್ಲಿ
6)19 ಜಿಲ್ಲೆಗಳಿಂದ ಕೂಡಿದ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು? ( KAS-1999 )
👉 ನವಂಬರ್ 1, 1956
7)1946ರಲ್ಲಿ ಕರ್ನಾಟಕದ ಏಕೀಕರಣದ ಸಮಾವೇಶ ನಡೆದ ಸ್ಥಳ? ( KAS-2005 )
👉 ಮುಂಬೈ,
8) ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವನ್ನು "ಯೂನಿಟ್ ಕಾಂಗ್ರೆಸ್" ಎಂದು ಎಕರೆಯಲಾಗಿದೆ, ಕಾಂಗ್ರೆಸ್ ಅಧಿವೇಶನದ ಜೊತೆಜೊತೆಗೆ ನಡೆದ ಅಧಿವೇಶನ ಯಾವುದು? ( KAS-2002 )
👉 ಅಖಿಲ ಭಾರತ ಸಾಮಾಜಿಕ ಸಮ್ಮೇಳ ,
9) ವಸಾಹತುಶಾಹಿ ಭಾರತದಲ್ಲಿ ಅರಸರ ಶ್ರೇಣಿಯಲ್ಲಿ ಮೈಸೂರು ಸಂಸ್ಥಾನದ ಸಂಸ್ಥಾನವು ಈ ರೀತಿಯದು? ( KAS-2015 )
👉 21ಬಂದೂಕು ಸಲಾಮಿನ ರಾಜ್ಯ,
10)1930ರ ಎಪ್ರಿಲ್ ನಲ್ಲಿ ಬೆಳಗಾವಿನಲ್ಲಿ ಉಪ್ಪನ್ನು ಮಾರಿ ಉಪ್ಪಿನ ಕಾನೂನನ್ನು ಮುರಿದವರು ಯಾರು? ( KAS-2017 )
👉 ಗಂಗಾಧರರಾವ್ ದೇಶಪಾಂಡೆ ,
11) ಗಾಂಧೀಜಿಯವರ ದಂಡಿ ಉಪ್ಪಿನ ಸತ್ಯಾಗ್ರಹ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದ ಕನ್ನಡಿಗ? ( KAS-2017 )
👉 ಮೈಲಾರ ಮಹದೇವಪ್ಪ,
12) ಮೈಸೂರಿನಲ್ಲಿ ಶಾಲೆಯನ್ನು ಯಾವ ಮೊದಲ ಕ್ರೈಸ್ತ ಮಿಷನರಿ ಪ್ರಾರಂಭಿಸಿತು?
👉 ವೆಸ್ಲಿಯನ್ ,
13) ಅವನು ರಾಣಿ ಚೆನ್ನಮ್ಮನ ಸೇನಾ ದಂಡನಾಯಕನಾಗಿದ್ದು ಗೆರಿಲ್ಲ ತಂತ್ರದಿಂದ ಬ್ರಿಟಿಷರೊಡನೆ ಹೋರಾಟ ನಡೆಸಿದ್ದ ಕರ್ನಾಟಕದ ಪ್ರಸಿದ್ಧ ಸ್ವತಂತ್ರ ಹೋರಾಟಗಾರ ಯಾರು? ( KAS-2017 )
👉 ಸಂಗೊಳ್ಳಿ ರಾಯಣ್ಣ ,
14) ಸರ್ಕಾರದಡಿ ಉದ್ಯೋಗಗಳನ್ನು ಗಳಿಸಲು ಬ್ರಾಹ್ಮಣರಲ್ಲದವರನ್ನು ಪ್ರೋತ್ಸಾಹಿಸಲು ಮುಖ್ಯ ಸಮಿತಿಗಳು ಕೈಗೊಳ್ಳುವ ಕ್ರಮಗಳ ಬಗ್ಗೆ ವರದಿ ನೀಡಲು ಮತ್ತು ವಿಚಾರಣೆ ನಡೆಸಲು ಮೈಸೂರಿನ ಮಹಾರಾಜರು 1918ರಲ್ಲಿ ನೇಮಿಸಿದ ಸಮಿತಿ ಯಾವುದು? ( KAS-2017 )
👉 ಮಿಲ್ಲರ್ ಸಮಿತಿ,
15) 1953 ರಲ್ಲಿನ ರಾಜ್ಯಗಳ ಪುನರ್ ರಚನಾ ಆಯೋಗವು ಇವರ ಅಧ್ಯಕ್ಷತೆ ಮತ್ತು ಸದಸ್ಯತ್ವದಲ್ಲಿ ರಚಿಸಲಾಯಿತು? ( KAS-2017 )
👉 ಅಧ್ಯಕ್ಷರು= ಫಜಲ್ ಅಲಿ ,
ಸದಸ್ಯರು= H,N,ಕುಂಜರು, ಕೆ, ಎಂ, ಪನಿಕರ್
16)1928ರ ಬೆಂಗಳೂರಿನ ಗಲಭೆಗಳಲ್ಲಿ ಕಂಡು ಬಂದಿರುವಂತಹ ಗಣಪತಿ ಗಲಭೆ ಮತ್ತು ಹಿಂದೂ-ಮುಸ್ಲಿಂ ಸರಣಿ ಸಂಘರ್ಷಗಳು ಬೆಂಗಳೂರು ನಗರದಲ್ಲಿ ಶಾಲೆಯ ಆವರಣದಲ್ಲಿ ಒಂದು ಗಣೇಶ ಪ್ರತಿಮೆಯ ಮೇಲೆ ಕಮಾನುಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಉಂಟಾಗಿದ್ದು ಇದನ್ನು ಮೈಸೂರಿನ ಮಹಾರಾಜರು ಖಂಡಿಸಿ ಈ ಘಟನೆಯ ಬಗ್ಗೆ ವಿಚಾರಣೆ ನಡೆಸಲು ಸಮಿತಿಯೊಂದನ್ನು ರಚಿಸಿತು ಈ ಸಮಿತಿಯ ಮುಖ್ಯಸ್ಥರು ಯಾರು? ( KAS-2017 )
👉 ಸರ್ ಎಂ ವಿಶ್ವೇಶ್ವರಯ್ಯ
17) ಯಾವ ವರದಿಯನ್ನಾದರಿಸಿ 1956 ರಲ್ಲಿ ಕರ್ನಾಟಕ ರೂಪಗೊಂಡಿತು? ( PSI-2018 )
👉 ಫಜಲ್ ಅಲಿ ಸಮಿತಿ
18) ಮೈಸೂರಿನ ಅಂಬಾವಿಲಾಸ ಅರಮನೆಯನ್ನು ವಿನ್ಯಾಸಗೊಳಿಸಿದವರು? ( PSI/ RSI-2014.2016 )
👉 ಹೆನ್ರಿ ಇರ್ವಿನ್,
19) ಜಯ ಭಾರತ ಜನನಿಯ ತನುಜಾತೆ ರಚಿಸಿದವರು? ( PSI-2015 )
👉 ಕುವೆಂಪು,
20) ಬೆಂಗಳೂರಿನ ಕಬ್ಬನ್ ಪಾರ್ಕ್ ನಿರ್ಮಾಪಕ? ( PSI-2015 )
👉 ಜಾನ್ ವೀಡ
21) ಕರ್ನಾಟಕದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟಮೊದಲ ಸಮಾಚಾರ ಪತ್ರಿಕೆ? ( PSI-2014 )
👉 ಮಂಗಳೂರು ಸಮಾಚಾರ,
22) ಟಿಪ್ಪು ಡ್ರಾಪ್ ಎಂದು ಪ್ರಸಿದ್ಧವಾದ ನಂದಿಬೆಟ್ಟ ಇರುವ ಜಿಲ್ಲೆ? ( PSI-2014 )
👉 ಚಿಕ್ಕಬಳ್ಳಾಪುರ
23) ಮಹಾತ್ಮ ಗಾಂಧೀಜಿಯವರು ತಮ್ಮ ಜೀವಿತಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ? ( PSI-2014 )
👉 ಬೆಳಗಾವಿ-1924ರಲ್ಲಿ
24) ಹಿಂದೂಸ್ತಾನ ಸೇವಾದಳ ವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದವರು? ( PSI-2018 )
👉 ಎನ್ ಎಸ್ ಹರ್ಡೆಕರ್,
25) ಮೈಸೂರು ಚಲೋ ಚಳುವಳಿ ನಡೆದ ವರ್ಷ? ( PSI-2013 )
👉 1947
26) ಕನ್ನಡದ ಧ್ವಜವನ್ನು ವಿನ್ಯಾಸ ಮಾಡಿದವರು? ( PSI-2009 )
👉 ಎಂ ರಾಮಮೂರ್ತಿ ,
27) ನಮ್ಮ ನಾಡಿನಲ್ಲಿ ಆಶ್ವಯುಜ ಮಾಸದಲ್ಲಿ ಬರುವ ಹಬ್ಬ ಅಂದರೆ? ( PSI-2009 )
👉 ನವರಾತ್ರಿ,
28) ಮೈಸೂರು ವಿಶ್ವವಿದ್ಯಾಲಯದ ಸ್ಥಾಪಕರು? ( PSI-2009 )
👉 4ನೇ ಶ್ರೀ ಕೃಷ್ಣರಾಜಒಡೆಯ
29) ಧ್ವಜ ಸತ್ಯಾಗ್ರಹ ನಡೆದ ಶಿವಪುರ ಯಾವ ಜಿಲ್ಲೆಯಲ್ಲಿದೆ? ( PSI-2009 )
👉 ಮಂಡ್ಯ
30) ಕರ್ನಾಟಕದಲ್ಲಿ ಗಾಂಧೀಜಿ ಅತ್ಯಂತ ಹೆಚ್ಚು ಸಮಯ ತಂಗಿದ್ದ ವರ್ಷ? ( PSI-2007 )
👉 1927
31) ಮೊಘಲರ ಕಾಲದಲ್ಲಿ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರ? ( PSI-2006 )
👉 ಶಿರಾ
32) ಕರ್ನಾಟಕ ದಂಡಿ ಎಂದು ಕರೆಯುವರು? ( PSI-2006 )
👉 ಅಂಕೋಲಾ
33) ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ? ( PSI-2005 )
👉 ಜನಪ್ರತಿನಿಧಿ ಸರ್ಕಾರಕ್ಕೆ ಚಳುವಳಿ ,
34) ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಈ ಕವಿತೆಯನ್ನು ರಚಿಸಿದವರು? ( PSI-2005 )
👉 ಹುಯಿಗೋಳ್ ನಾರಾಯಣರಾವ್
35) ಹೈದರಾಬಾದಿನ ನಿಜಾಮರ ನಿಯಂತ್ರಣದಲ್ಲಿದ್ದ ಹೈದ್ರಾಬಾದ-ಕರ್ನಾಟಕ ಪ್ರದೇಶವು ಭಾರತದ ಒಕ್ಕೂಟದಲ್ಲಿ ಸೇರಿದ್ದು? ( PSI-2002 )
👉 1948 ಸಪ್ಟಂಬರ್
0 Comments