ರಾಷ್ಟ್ರೀಯ ಎಚ್‌ಐವಿ ಪರೀಕ್ಷಾ ದಿನ - ಜೂನ್ 27

ರಾಷ್ಟ್ರೀಯ ಎಚ್‌ಐವಿ ಪರೀಕ್ಷಾ ದಿನ  - ಜೂನ್ 27
========================
# ಪ್ರತಿ ವರ್ಷ ರಾಷ್ಟ್ರೀಯ ಎಚ್‌ಐವಿ ಪರೀಕ್ಷೆ ದಿನವನ್ನು ಜೂನ್ 27ರಂದು ದೇಶದಾದ್ಯಂತ ಆಚರಿಸಲಾಗುತ್ತದೆ.

# ರಾಷ್ಟ್ರೀಯ ಎಚ್‌ಐವಿ ಪರೀಕ್ಷಾ ದಿನವನ್ನು (ಎನ್‌ಎಚ್‌ಟಿಡಿ) ಮೊದಲ ಬಾರಿಗೆ ಜೂನ್ 27, 1995 ರಂದು ಆಚರಿಸಲಾಯಿತು. 

# ಎಚ್‌ಐವಿ ಪರೀಕ್ಷೆಗೆ ಸೋಂಕಿತ ವ್ಯಕ್ತಿಯನ್ನು ಒಳಪಡಿಸಿ ಅವರ ಸ್ಥಿತಿಯನ್ನು ತಿಳಿದುಕೊಂಡು ಆರೈಕೆ ಮತ್ತು ಚಿಕಿತ್ಸೆಯನ್ನು ಮಾಡಿ ಜನರನ್ನು ಪ್ರೋತ್ಸಾಹಿಸಲು ಈ ದಿನವನ್ನು ಆಚರಿಸಲಾಗುತ್ತದೆ.

★ 2019ರ ರಾಷ್ಟ್ರೀಯ ಎಚ್‌ಐವಿ ಪರೀಕ್ಷಾ ದಿನದ ಧ್ಯೇಯ ವಾಕ್ಯ - (theme) "Doing It My Way".

★ ಏಡ್ಸ್ 

# ಅಕ್ವೈರ್ಡ್ ಇಮ್ಯುನೋ ಡಿಫಿಷಿಯೆನ್ಸಿ ಸಿಂಡ್ರೋಮ್ ಹೃಸ್ವ ರೂಪವೇ ಏಡ್ಸ್ (Acquired immune deficiency syndrome.). 
* ಇದನ್ನು ಮೊಟ್ಟ ಮೊದಲ ಬಾರಿಗೆ 1981ರಲ್ಲಿ ಅಮೆರಿಕದಲ್ಲಿ ಗುರುತಿಸಲಾಯಿತು. 
* ಭಾರತದಲ್ಲಿ 1986ರಲ್ಲಿ ಭಾರತದ ಚೆನ್ನೈನಲ್ಲಿ ಪತ್ತೆ ಮಾಡಲಾಯಿತು. 
* ಏಡ್ಸ್ ಗೆ ಕಾರಣವಾದ ವೈರಸ್ ಹೆಚ್‍ಐವಿ (Human Immuno Deficiency Virus) ಇದನ್ನು ಮೊಟ್ಟ ಮೊದಲ ಬಾರಿಗೆ 1983ರಲ್ಲಿ ಫ್ರೆಂಚ್ ವಿಜ್ಞಾನಿಗಳು ಪತ್ತೆ ಹಚ್ಚಿದರು. 
* 1984ರಲ್ಲಿ ಅಮೆರಿಕಾದ ವಿಜ್ಞಾನಿಗಳು ಏಡ್ಸ್ ಗೆ ಕಾರಣವಾಗುವ ವೈರಸ್ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.

# ಏಡ್ಸ್ ಸೋಂಕಿತರಿಗೆ ಇರುವ ಯೋಜನೆಗಳು:
  --- ಅಂತ್ಯೋದಯ ಯೋಜನೆ, ರಾಜೀವ್ ಗಾಂಧಿ ವಸತಿ ಮನೆ ನಿರ್ಮಾಣ, ಉಚಿತ ಪರೀಕ್ಷೆ, ಕಡ್ಡಾಯ ಶಿಕ್ಷಣ, ವಿದ್ಯಾರ್ಥಿ ವೇತನ, ಧನಶ್ರೀ, ಮೈತ್ರಿ, ಚೇತನ ಯೋಜನೆ, ಉಚಿತ ಕಾನೂನು ಸೇವೆ, ಕಾಬಾ ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಸೋಂಕಿತ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆರೋಗ್ಯ ಆರೈಕೆಗಾಗಿ ಮಾಸಿಕ 650 ರೂ. ಮತ್ತು 750 ರೂ. ನೀಡಲಾಗುತ್ತಿದೆ.

# ಏಡ್ಸ್ ಬಗ್ಗೆ ಅರಿವು ಮೂಡಿಸಲು ಭಾರತೀಯ ರೈಲ್ವೆಯು ರೆಡ್ ರಿಬ್ಬನ್ ಎಕ್ಸ್ ಪ್ರೆಸ್ ಎಂಬ ಹೊಸ ರೈಲನ್ನು 2007 ಡಿಸೆಂಬರ್ 1ರಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಉದ್ಘಾಟಿಸಿದ್ದರು. 
* 2017 ಡಿಸೆಂಬರ್ 2ರಂದು ಭಾರತ ಸರ್ಕಾರ ಆರೋಗ್ಯ ಮತ್ತು ಕಲ್ಯಾಣ ಕುಟುಂಬ ಕಲ್ಯಾಣ ಇಲಾಖೆ 2001-2014ರ ಅವಧಿಯ ರಾಷ್ಟ್ರೀಯ ಕಾರ್ಯತಂತ್ರ ಯೋಜನೆ ಮತ್ತು ಸಂಪರ್ಕ ಅಭಿಯಾನವನ್ನು ಡಿಸೆಂಬರ್ 1ರ ಏಡ್ಸ್ ದಿನಾಚರಣೆ ಅಂಗವಾಗಿ ಉದ್ಘಾಟಿಸಿದೆ. 

# 2030ರೊಳಗೆ ಸಾಂಕ್ರಾಮಿಕ ರೋಗ ಏಡ್ಸ್ ನ್ನು ಸಂಪೂರ್ಣ ಹತೋಟಿಗೆ ತರುವ ಉದ್ದೇಶದಿಂದ 90:90:90 ಕಾರ್ಯತಂತ್ರವನ್ನು ಕೇಂದ್ರ ಸರ್ಕಾರ ರೂಪಿಸಿದೆ. 
* ಇದರ ಅರ್ಥ ಶೇ.90 ದೇಶದ ಜನರಿಗೆ ಏಡ್ಸ್ ರೋಗದ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಮೂಡಿಸುವುದು. 
* ಶೇ.90 ರಷ್ಟು ಹೆಚ್‍ಐವಿ ರೋಗದ ಸ್ಥಿತಿಯನ್ನು ಶೀಘ್ರವಾಗಿ ಗುರುತಿಸಿ ಎ.ಆರ್.ಟಿ. ಚಿಕಿತ್ಸೆ ನೀಡುವುದು ಮತ್ತು ಶೇ.90 ರಷ್ಟು ಜನರಿಗೆ ಎಆರ್‍ಟಿ (Antietroviral Theraphy) ಚಿಕಿತ್ಸೆ ನೀಡುವುದು.

Post a Comment

0 Comments