ಧಾತುಗಳು ಮತ್ತು ಅವುಗಳ ಕ್ರಿಯಾ ಪದಗಳು
|
ಧಾತು |
ಅರ್ಥ |
ಕ್ರಿಯಾಪದ |
||
|
ಅಲರು |
- |
ಹೂವಾಗು |
- |
ಅಲರಿತು |
|
ಅರಳು |
- |
ಹೂವಾಗು |
- |
ಅರಳಿತು |
|
ಅಡರು |
- |
ಏರು |
- |
ಅಡರಿದನು |
|
ಅಪ್ಪು |
- |
ತಬ್ಬಿಕೊಳ್ಳು |
- |
ಅಪ್ಪಿದನು |
|
ಅಡು |
- |
ಅಡಿಗೆ ಮಾಡು |
- |
ಅಟ್ಟನು |
|
ಅಗಿ |
- |
ಹಲ್ಲಿನಿಂದ ಅಗಿಯುವಿಕೆ |
- |
ಅಗಿದನು |
|
ಅರೆ |
- |
ಅರೆಯುವಿಕೆ |
- |
ಅರೆದನು |
|
ಅಗೆ |
- |
ನೆಲತೋಡು |
- |
ಅಗೆದನು |
|
ಅರಸು೫೫ |
- |
ಹುಡುಕು |
- |
ಅರಸುವನು |
|
ಅಂಟು |
- |
ಮೆತ್ತು |
- |
ಅಂಟಿತು |
|
ಅಡಗು |
- |
ಮುಚ್ಚಿಕೊ |
- |
ಅಡಗಿತು |
|
ಅರಿ |
- |
ಕತ್ತರಿಸು |
- |
ಅರಿದನು |
|
ಅರಿ |
- |
ತಿಳಿ |
- |
ಅರಿದನು |
|
ಅದಿರು |
- |
ಅಲ್ಲಾಡು |
- |
ಅದಿರಿತು |
|
ಅಲೆ |
- |
ತಿರುಗು |
- |
ಅಲೆದನು |
|
ಅಳಲು |
- |
ಸಂಕಟಪಡು |
- |
ಅಳಲಿದನು |
|
ಅಳೆ |
- |
ಅಳತೆಮಾಡು |
- |
ಅಳೆದನು |
|
ಅಂಜು |
- |
ಹೆದರು |
- |
ಅಂಜಿದನು |
|
ಅಳಿ |
- |
ಸಾಯ್ |
- |
ಅಳಿದನು |
|
ಅಳು |
- |
ರೋದನಮಾಡು |
- |
ಅಳುತ್ತಾನೆ |
|
ಅಳಿಸು |
- |
ಇಲ್ಲದಂತೆಮಾಡು |
- |
ಅಳಿಸಿದನು |
|
ಅವಚು |
- |
ಅಪ್ಪಿಕೊ |
- |
ಅವಚಿದನು |
|
ಆಳು |
- |
ರಾಜ್ಯಭಾರ ಮಾಡು |
- |
ಆಳಿದನು |
|
ಆನ್ |
- |
ಧರಿಸು |
- |
ಆಂತನು |
|
ಆರು |
- |
ಒಣಗು |
- |
ಆರಿತು |
|
ಆಲಿಸು |
- |
ಕೇಳು |
- |
ಆಲಿಸಿದನು |
|
ಆಗು |
- |
ಮುಗಿ |
- |
ಆಯಿತು |
|
ಆರ್ |
- |
ಆರ್ಭಟಿಸು |
- |
ಆರ್ದನು (ಆರ್ದಂ) |
|
ಆರ್ |
- |
ಸಾಮರ್ಥ್ಯ |
- |
ಆರನು |
|
ಇಡು |
- |
ಇಡುವಿಕೆ |
- |
ಇಟ್ಟನು |
|
ಇಕ್ಕು |
- |
ನೀಡು |
- |
ಇಕ್ಕಿದನು |
|
ಇಕ್ಕು |
- |
ಮುಚ್ಚು |
- |
ಕದವನ್ನು ಇಕ್ಕಿದನು |
|
ಇಕ್ಕು |
- |
ಹೊಡೆ-ಕೊಲ್ಲು |
- |
ಇಕ್ಕಿದನು |
|
ಇರು |
- |
ಇರುವಿಕೆ |
- |
ಇದ್ದಾನೆ |
|
ಇಸು |
- |
ಬಾಣಪ್ರಯೋಗ ಮಾಡು |
- |
ಎಚ್ಚನು |
|
ಇರಿ |
- |
ಕತ್ತರಿಸು |
- |
ಇರಿದನು |
|
ಇಳಿ |
- |
ಕೆಳಗೆ ಹೋಗು |
- |
ಇಳಿದನು |
|
ಇಂಗು |
- |
ಇಲ್ಲದಾಗು |
- |
ಇಂಗಿತು |
|
ಈಡಾಡು |
- |
ಚೆಲ್ಲಾಡು |
- |
ಈಡಾಡಿದನು |
|
ಈಯ್ |
- |
ಕರುಹಾಕು |
- |
ಈಯಿತು-(ಈದಿತು) |
|
ಈಂಟು |
- |
ಕುಡಿ |
- |
ಈಂಟಿದನು |
|
ಈಸು |
- |
ನೀರಿನಲ್ಲಿ ಈಸುವಿಕೆ |
- |
ಈಸಿದನು |
|
ಈಜು |
- |
ಈಜಿದನು |
||
|
ಉಡು |
- |
ಉಡುವಿಕೆ |
- |
ಉಟ್ಟನು |
|
ಉಗಿ |
- |
ಎಳೆಯುವುದು |
- |
ಉಗಿವೆನು |
|
ಉಗಳು |
- |
ಉಗುಳುವಿಕೆ |
- |
ಉಗುಳಿದನು |
|
ಉಮ್ಮಳಿಸು |
- |
ದುಃಖಿಸು |
- |
ಉಮ್ಮಳಿಸಿದನು |
|
ಉಸುರು |
- |
ಹೇಳು |
- |
ಉಸುರಿದನು |
|
ಉಳಿ |
- |
ಮಿಕ್ಕು |
- |
ಉಳಿದಿದೆ |
|
ಉಕ್ಕು |
- |
ಹೊರಸೂಸು |
- |
ಉಕ್ಕಿಸು |
|
ಉದಿರು |
- |
ಕೆಳಗೆ ಬೀಳು |
- |
ಉದಿರಿತು |
|
ಉದುರು |
- |
ಉದುರಿತು |
||
|
ಉರುಳು |
- |
ಉರುಳುವಿಕೆ |
- |
ಉರುಳಿತು |
|
ಉಬ್ಬು |
- |
ಉತ್ಸಾಹಗೊಳ್ಳು-ದಪ್ಪವಾಗು |
- |
ಉಬ್ಬಿದನು |
|
ಉರಿ |
- |
ಬೆಂಕಿ ಹತ್ತು |
- |
ಉರಿಯುತ್ತದೆ |
|
ಉಗ್ಗು |
- |
ತಡೆದುಮಾತಾಡು |
- |
ಉಗ್ಗುತ್ತಾನೆ |
|
ಉಜ್ಜು |
- |
ತಿಕ್ಕು |
- |
ಉಜ್ಜಿದನು |
|
ಉಳುಕು |
- |
ನರಗಳತೊಡಕು |
- |
ಉಳುಕಿದೆ |
|
ಉದ್ದು |
- |
ತಿಕ್ಕು |
- |
ಉದ್ದುತ್ತದೆ |
|
ಉಳಿಸು |
- |
ಮಿಕ್ಕಿಸು |
- |
ಉಳಿಸಿದನು |
|
ಉಳು |
- |
ಭೂವ್ಯವಸಾಯ ಮಾಡು |
- |
ಉತ್ತನು |
|
ಊರು |
- |
ನೆಡು |
- |
ಸಸಿಊರಿದನು |
|
ಊಡು |
- |
ಊಟಮಾಡಿದನು |
- |
ಊಡಿಸಿದನು |
|
ಊದು |
- |
ಗಾಳಿಯನ್ನುಬಿಡು |
- |
ಊದಿದನು |
|
ಎಣಿಸು |
- |
ಲೆಕ್ಕಮಾಡು |
- |
ಎಣಿಸಿದನು |
|
ಎಸೆ |
- |
ಚೆಲ್ಲು |
- |
ಎಸೆದನು |
|
ಎಸಗು |
- |
ಮಾಡು |
- |
ಎಸಗಿದನು |
|
ಎನ್ನು (ಎ) |
- |
ಹೇಳು |
- |
ಎಂದನು |
|
ಎರೆ |
- |
ನೀಡು |
- |
ಎರೆದನು |
|
ಎರೆ |
- |
ಬೇಡು |
- |
ಎರೆದನು |
|
ಎಳೆ |
- |
ಜಗ್ಗು |
- |
ಎಳೆದನು |
|
ಎರಗು |
- |
ಮೇಲೆ ಬೀಳು |
- |
ಎರಗಿತು |
|
ಏಳು |
- |
ಎದ್ದುನಿಲ್ಲು |
- |
ಎದ್ದನು |
|
ಎರಗು |
- |
ನಮಸ್ಕರಿಸು |
- |
ಎರಗಿದನು |
|
ಎಳಸು |
- |
ಅಪೇಕ್ಷಿಸು |
- |
ಎಳಸಿದನು |
|
ಏದು |
- |
ತೇಗು |
- |
ಏದುತ್ತಾನೆ |
|
ಒಗೆ |
- |
ಹುಟ್ಟು |
- |
ಒಗೆಯಿತು |
|
ಒಯ್ |
- |
ಸಾಗಿಸು-ಬೇರೆಡೆಗೆಒಯ್ಯಿ |
- |
ಒಯ್ದನು |
|
ಒಳಸಾರು |
- |
ಒಳಗೆಹೋಗು |
- |
ಒಳಸಾರಿತು |
|
ಒಸರು |
- |
ಜಿನುಗು |
- |
ಒಸರಿತು |
|
ಒರಗು |
- |
ಮಲಗು-ಆಶ್ರಯಿಸಿನಿಲ್ಲು |
- |
ಒರಗಿದನು-ಬೀಳು |
|
ಒರೆ |
- |
ಹೇಳು |
- |
ಒರೆದನು |
|
ಒಡಂಬಡು |
- |
ಒಪ್ಪು |
- |
ಒಡಂಬಟ್ಟನು |
|
ಒಡೆ |
- |
ಸೀಳು-ಅರಳು |
- |
ಒಡೆಯಿತು |
|
-ಭಾಗಮಾಡು-ಬಿರಿ |
||||
|
ಒಸೆ |
- |
ಪ್ರೀತಿ |
- |
ಒಸೆದನು |
|
ಒಲೆ |
- |
ಪ್ರೀತಿಹೊಂದು |
- |
ಒಲೆಯಿತು, ಅನುಗ್ರಹಿಸು |
|
ಒಕ್ಕಲಿಕ್ಕು |
- |
ಕೊಲ್ಲು-ಮುಗಿಸು |
- |
ಒಕ್ಕಲಿಕ್ಕಿದನು |
|
ಒಡ್ಡು |
- |
ಎದುರಾಗು-ಬೇಡು |
- |
ಒಡ್ಡಿದರು- ಕೈಒಡ್ಡಿದರು |
|
ಒಣಗು |
- |
ಶುಷ್ಕವಾಗು |
- |
ಒಣಗಿತು |
|
ಒತ್ತು |
- |
ಹಿಸುಕು-ಪಕ್ಕಕ್ಕೆತಳ್ಳು |
- |
ಒತ್ತಿದನು |
|
ಓದು |
- |
ಓದುವಿಕೆ |
- |
ಓದಿದನು |
|
ಓಲೈಸು |
- |
ಆಶ್ರಯಿಸು |
- |
ಓಲೈಸಿದನು |
|
ಓವು |
- |
ಸಂರಕ್ಷಿಸು |
- |
ಓವಿದನು |
|
ಓಕರಿಸು |
- |
ವಾಂತಿಮಾಡು |
- |
ಓಕರಿಸಿದನು |
|
ಓಡು |
- |
ಓಡುವಿಕೆ |
- |
ಓಡಿದನು |
|
ಔಂಕು |
- |
ಹಿಸುಕು |
- |
ಔಂಕಿದನು |
|
ಅವುಂಕು |
- |
ಹಿಚುಕು |
- |
ಅವುಂಕಿದನು |
|
ಔತುಕೊಳ್ಳು |
- |
ಅಡಗು |
- |
ಔತುಕೊಂಡನು |
|
ಕದಿ |
- |
ಕಳವುಮಾಡು |
- |
ಕದ್ದನು |
|
ಕರಿ |
- |
ಕರಿಯುವಿಕೆ |
- |
ಎಣ್ಣೆಯಲ್ಲಿ ಕರಿದನು |
|
ಕರೆ |
- |
ಸುರಿಸು |
- |
ಹಾಲುಕರೆದನು |
|
ಕರೆ |
- |
ಕರೆಯುವಿಕೆ |
- |
ಕರೆದನು |
|
ಕನಲು |
- |
ಕೋಪಗೊಳ್ಳು |
- |
ಕನಲಿದನು |
|
ಕವಿ |
- |
ಮುಸುಕು |
- |
ಕವಿಯಿತು |
|
ಕಲಿ |
- |
ತಿಳಿ |
- |
ಕಲಿತನು |
|
ಕಲಸು |
- |
ಬೆರಸು |
- |
ಕಲಸಿದನು |
|
ಕಳು |
- |
ಕದಿಯುವಿಕೆ |
- |
ಕದ್ದನು |
|
ಕಡಿ |
- |
ಛೇದಿಸು |
- |
ಕಡಿದನು |
|
ಕಲಕು |
- |
ಕಲಕುವಿಕೆ |
- |
ನೀರುಕಲಕಿತು |
|
ಕಚ್ಚು |
- |
ಹಲ್ಲಿನಿಂದಕಡಿ |
- |
ಕಚ್ಚಿದನು |
|
ಕಟ್ಟು |
- |
ಬಂಧಿಸು |
- |
ಕಟ್ಟಿದನು |
|
ಕಸಿ |
- |
ಅಪಹರಿಸು |
- |
ಕಸಿದನು |
|
ಕಡೆಗಣಿಸು |
- |
ತಿರಸ್ಕರಿಸು |
- |
ಕಡೆಗಣಿಸಿದನು |
|
ಕಂಗೊಳಿಸು |
- |
ಪ್ರಕಾಶಿಸು |
- |
ಕಂಗೊಳಿಸುತ್ತದೆ |
|
ಕದಕು |
- |
ಕದಕುವಿಕೆ |
- |
ಕದಕಿದನು |
|
ಕದಡು |
- |
ಕದಡುವಿಕೆ |
- |
ಕದಡಿದನು |
|
ಕರ್ದುಕು |
- |
ಕೊಕ್ಕಿನಿಂದ ಕುಕ್ಕು |
- |
ಕರ್ದುಕಿತು |
|
ಕನಲು |
- |
ಕೋಪಗೊಳ್ಳು |
- |
ಕನಲಿದನು |
|
ಕನವರಿಸು |
- |
ಬಡಬಡಿಸು |
- |
ಕನವರಿಸಿದನು |
|
ಕರಗು |
- |
ವಿಲೀನವಾಗು |
- |
ಕರಗಿತು |
|
ಕಳುಹು |
- |
ಕಳುಹುವಿಕೆ |
- |
ಕಳುಹಿದನು |
|
ಕಳಿಸು |
- |
ಕಳುಹುವಿಕೆ |
- |
ಕಳಿಸಿದನು |
|
ಕಾ(ಕಾಯ್) (ಕಾಯಿ) |
- |
ರಕ್ಷಿಸು |
- |
ಕಾಯುತ್ತಾನೆ-ಕಾಯ್ದನು |
|
ಕಾಣು |
- |
ನೋಡು |
- |
ಕಂಡನು |
|
ಕಾದು |
- |
ಜಗಳವಾಡು |
- |
ಕಾದಿದನು |
|
ಕಾಪಾಡು |
- |
ರಕ್ಷಿಸು |
- |
ಕಾಪಾಡಿದನು |
|
ಕಾಯು(ಕಾಯಿ) |
- |
ಬಿಸಿಯೇರು |
- |
ಕಾಯಿಸಿದನು-ಕಾಯ್ದಿದೆ |
|
ಕಾಡು |
- |
ಕಾಟಕೊಡು |
- |
ಕಾಡುತ್ತಾನೆ |
|
ಕಿಡು (ಕೆಡು) |
- |
ಕೆಡುವಿಕೆ |
- |
ಕೆಟ್ಟನು |
|
ಕೀಳ್ |
- |
ಕೀಳುವಿಕೆ |
- |
ಕಿತ್ತನು |
|
ಕೀ |
- |
ಕೀವಾಗುವಿಕೆ |
- |
ಕೀತಿದೆ |
|
ಕುಂದು |
- |
ಒತ್ತು |
- |
ಕುಂದಿದೆ (ಕಡಿಮೆಯಾಗು) |
|
ಕುಕ್ಕು |
- |
ಕುಕ್ಕುವಿಕೆ |
- |
ಕುಕ್ಕುತ್ತದೆ |
|
(ಚುಂಚಿನಿಂದ ಕುಕ್ಕುವುದು) |
- |
ಕುಕ್ಕಿತು |
||
|
ಕುಡಿ |
- |
ಕುಡಿಯುವಿಕೆ |
- |
ಕುಡಿದನು |
|
ಕುಡು (ಕೊಡು) |
- |
ಕೊಡುವಿಕೆ |
- |
ಕೊಟ್ಟನು |
|
ಕುದಿ |
- |
ಕುದಿಯುವಿಕೆ (ಕರುಬುವಿಕೆ) |
- |
ಕುದ್ದಿತು |
|
ಕುಪ್ಪಳಿಸು |
- |
ಹಾರು |
- |
ಕುಪ್ಪಳಿಸುತ್ತಾನೆ |
|
ಕುಗ್ಗು (ಕುರ್ಗು) |
- |
ಸಣ್ಣದಾಗು (ಉಡುಗು) |
- |
ಕುಗ್ಗಿದನು |
|
ಕುಲುಕು |
- |
ಅಲ್ಲಾಡಿಸು |
- |
ಕುಲುಕಿದನು |
|
ಕೂಡು |
- |
ಬೆರೆ |
- |
ಕೂಡಿದನು |
|
ಕೂಗು |
- |
ಕೂಗುವಿಕೆ |
- |
ಕೂಗಿದನು |
|
ಕೆಚ್ಚು |
- |
ನೂಲು ಕೆಚ್ಚುವಿಕೆ |
- |
ಕೆಚ್ಚಿದನು |
|
ಕೆಡಹು(ಕೆಡವು) |
- |
ನೆಲಕ್ಕೆ ಬೀಳುವಂತೆ ಮಾಡು |
- |
ಕೆಡಹಿದನು(ಕೆಡವಿದನು) |
|
ಕೆಡೆ |
- |
ಬೀಳು |
- |
ಕೆಡೆದನು |
|
ಕೆರೆ |
- |
ತುರಿಸು |
- |
ಕೆರೆದನು |
|
ಕೆಣಕು |
- |
ರೇಗಿಸು |
- |
ಕೆಣಕಿದನು |
|
ಕೆತ್ತು |
- |
ಸವರು |
- |
ಕೆತ್ತಿದರು |
|
ಕೆಡಿಸು |
- |
ಹಾಳುಮಾಡು |
- |
ಕೆಡಿಸಿದನು |
|
ಕೆರಳು |
- |
ಸಿಟ್ಟಿಗೇಳು |
- |
ಕೆರಳಿದನು |
|
ಕೆಲಸಾರು |
- |
ಹತ್ತಿರಕ್ಕೆ ಬಾ |
- |
ಕೆಲಸಾರಿದನು |
|
ಕೇಳು |
- |
ಕೇಳುವಿಕೆ |
- |
ಕೇಳಿದನು |
|
ಕೇರು |
- |
ಹಸನುಮಾಡು (ಧಾನ್ಯಶುದ್ಧಿ ಮಾಡುವಿಕೆ) |
- |
ಕೇರಿದನು |
|
ಕೈಗೂಡು |
- |
ಕೈಗೆಸಿಗು |
- |
ಕೈಗೂಡಿತು |
|
ಕೈಬಿಡು |
- |
ತ್ಯಜಿಸು |
- |
ಕೈಬಿಟ್ಟನು |
|
ಕೈಸಾರು |
- |
ವಶವಾಗು |
- |
ಕೈಸಾರಿತು |
|
ಕೊಡು(ಕುಡು) |
- |
ಕೊಡುವಿಕೆ |
- |
ಕೊಟ್ಟನು |
|
ಕೊಂಡಾಡು |
- |
ಹೊಗಳು |
- |
ಕೊಂಡಾಡಿದನು |
|
ಕೊನರು |
- |
ಚಿಗುರು |
- |
ಕೊನರಿತು |
|
ಕೊಲ್ಲು(ಕೊಲ್) |
- |
ಸಾಯಿಸು |
- |
ಕೊಂದನು |
|
ಕೊಚ್ಚು |
- |
ಚೂರುಮಾಡು |
- |
ಕೊಚ್ಚಿದನು |
|
ಕೊಡವು |
- |
ಕೊಡವುವಿಕೆ |
- |
ಕೊಡವಿದನು |
|
ಕೊರಗು |
- |
ವ್ಯಸನಪಡು |
- |
ಕೊರಗಿದನು |
|
ಕೊರೆ |
- |
ಕತ್ತರಿಸು |
- |
ಕೊರೆದನು |
|
ಕೊಯ್ |
- |
ಕೊಯ್ಯುವಿಕೆ |
- |
ಕೊಯ್ದನು |
|
ಕೊಳೆ |
- |
ಕೊಳೆಯುವಿಕೆ |
- |
ಕೊಳೆತಿದೆ |
|
ಕೋರಯಿಸು |
- |
ಕಣ್‌ಕುಕ್ಕು |
- |
ಕೋರೈಸುತ್ತದೆ |
|
ಕೋರು |
- |
ಬಯಸು |
- |
ಕೋರಿದನು |
|
ಗದರು |
- |
ಸಿಟ್ಟುಮಾಡು ಗದ್ದರಿಸು |
- |
ಗದರಿದನು |
|
ಗಳಪು |
- |
ಹರಟು |
- |
ಗಳಪಿದನು |
|
ಗಳಿಸು |
- |
ಕೂಡುಹಾಕು |
- |
ಗಳಿಸಿದನು |
|
ಗುದ್ದು |
- |
ಮುಷ್ಟಿಯಿಂದ ಹೊಡೆ |
- |
ಗುದ್ದಿದನು |
|
ಗುಡಿಸು |
- |
ಸ್ವಚ್ಛಮಾಡು |
- |
ಗುಡಿಸಿದನು |
|
ಗುಡುಗು |
- |
ಗದರಿಸು |
- |
ಗುಡುಗಿದನು |
|
ಗೆಲ್ (ಗೆಲ್ಲು) |
- |
ಗೆದ್ದೆ |
- |
ಗೆದ್ದೆನು |
|
ಗೆಯ್ (ಗೆಯ್ಯಿ) |
- |
ಮಾಡುವಿಕೆ |
- |
ಗೆಯ್ದನು |
|
ಗೋರು |
- |
ತಳಕ್ಕೆ ಹಚ್ಚಿಮೊಗೆಯುವಿಕೆ |
- |
ಗೋರಿದನು |
|
ಗೋಳಿಡು |
- |
ಹೆಚ್ಚಾಗಿ ದುಃಖಪಡು |
- |
ಗೋಳಿಟ್ಟನು |
|
ಚೆಲ್ಲು |
- |
ಬಿಸಾಡು |
- |
ಚೆಲ್ಲಿದನು |
|
ಚೆಚ್ಚು (ಜಜ್ಜು) |
- |
ಜಜ್ಜಿಹಾಕು |
- |
ಚೆಚ್ಚಿದನು |
|
ಚಿಗಿ |
- |
ಕೊನರುವಿಕೆ |
- |
ಚಿಗಿತಿತು |
|
ಚೀರು |
- |
ಗಟ್ಟಿಯಾಗಿ ಕೂಗು |
- |
ಚೀರಿದನು |
|
ಚಾಚು |
- |
ಮುಂದುಮಾಡು |
- |
ಚಾಚಿದನು |
|
ಚಿಮ್ಮು |
- |
ಬೆರಳಿನಿಂದ ನೂಕು |
- |
ಚಿಮ್ಮಿದನು |
|
ಚುಚ್ಚು |
- |
ಚುಚ್ಚುವಿಕೆ |
- |
ಚುಚ್ಚಿತು |
|
ಚಿತ್ತೈಸು |
- |
ಕೇಳು |
- |
ಚಿತ್ತೈಸಿದನು |
|
ಚಿವುಟು |
- |
ಉಗುರಿನಿಂದ ಚುಚ್ಚು |
- |
ಚಿವುಟಿದನು |
|
ಚಿಮುಕಿಸು |
- |
ಚಿಮುಕಿಸುವಿಕೆ |
- |
ನೀರು ಚಿಮುಕಿಸಿದನು |
|
ಚೀಪು |
- |
ಚೀಪುವಿಕೆ |
- |
ಚೀಪುತ್ತಾನೆ |
|
ಜಜ್ಜು |
- |
ಜಜ್ಜಿಹಾಕು |
- |
ಜಜ್ಜಿದನು |
|
ಜಾರು |
- |
ಜಾರುವಿಕೆ |
- |
ಜಾರಿದನು |
|
ಜಗುಳು |
- |
ಜಾರುವಿಕೆ |
- |
ಜಗುಳುತ್ತದೆ |
|
ಜಡಿ |
- |
ಹೊಡೆ |
- |
ಜಡಿದನು |
|
ಜಿನುಗು (ಜಿನುಂಗು) |
- |
ಸಣ್ಣಗೆ ಒಸರುವಿಕೆ |
- |
ಜಿನುಗುತ್ತದೆ |
|
ತಗಲು |
- |
ಸೊಂಕು |
- |
ತಗಲಿತು |
|
ತಣಿ |
- |
ತೃಪ್ತಿಗೊಳ್ಳು |
- |
ತಣಿದನು |
|
ತಗ್ಗು |
- |
ಬಾಗು |
- |
ತಗ್ಗಿದನು |
|
ತಳ್ಳು |
- |
ನೂಕು |
- |
ತಳ್ಳಿದನು |
|
ತಡವು |
- |
ಕೈಯಿಂದ ಮುಟ್ಟಿನೋಡುವಿಕೆ |
- |
ತಡವಿದನು |
|
ತಟ್ಟು |
- |
ಬಡಿ |
- |
ತಟ್ಟಿದನು |
|
ತಡೆ |
- |
ನಿಲ್ಲಿಸು, ಎದುರಿಸು, ಪ್ರತಿಬಂಧಿಸು |
- |
ತಡೆದನು |
|
ತಣಿ |
- |
ತೃಪ್ತಿಪಡು |
- |
ತಣಿದನು |
|
ತಳೆ |
- |
ಹೊಂದು, ಧರಿಸು |
- |
ತಳೆದನು |
|
ತಳಿ |
- |
ಚಿಮುಕಿಸು |
- |
ನೀರುತಳಿದಳು |
|
ತದೆ |
- |
ಹೊಡೆ |
- |
ತದ್ದನು |
|
ತರುಬು |
- |
ನಿಲ್ಲಿಸು |
- |
ತರುಬಿದನು |
|
ತಪ್ಪು |
- |
ಚ್ಯುತಿಹೊಂದು |
- |
ತಪ್ಪಿದನು |
|
ತಬ್ಬು |
- |
ಆಲಂಗಿಸು |
- |
ತಬ್ಬಿದನು |
|
ತರಿ |
- |
ಕತ್ತರಿಸು |
- |
ತರಿದನು |
|
ತಲುಪು |
- |
ಸೇರು |
- |
ತಲುಪಿದನು |
|
ತಲ್ಲಣಿಸು |
- |
ಸಂಕಟಪಡು |
- |
ತಲ್ಲಣಿಸಿದನು |
|
ತಳುವು |
- |
ತಡಮಾಡು |
- |
ತಳುವಿದನು |
|
ತಳೆ |
- |
ಹೊಂದು (ಧರಿಸು) |
- |
ತಳೆದನು |
|
ತಾಕು (ತಾಗು) |
- |
ಮುಟ್ಟು, ಎದುರಾಗು |
- |
ತಾಕಿದನು |
|
ತಾಳು |
- |
ಸೈರಿಸು |
- |
ತಾಳಿದನು |
|
ತಾಗು |
- |
ಸೊಂಕು |
- |
ಮೈತಾಗಿತು |
|
ತಿಳಿ |
- |
ತಿಳಿಯುವಿಕೆ |
- |
ತಿಳಿದನು |
|
ತಿರುಗು |
- |
ಅಲೆ, ಮರಳು |
- |
ತಿರುಗಿದನು |
|
ತಿನ್ನು |
- |
ಭಕ್ಷಿಸು |
- |
ತಿಂದನು |
|
ತಿರಿ |
- |
ತಿರಿಯುವಿಕೆ |
- |
ತಿರಿದನು |
|
ತಿವಿ |
- |
ಚುಚ್ಚು |
- |
ತಿವಿದನು |
|
ತಿದ್ದು |
- |
ಸರಿಪಡಿಸು |
- |
ತಿದ್ದಿದನು |
|
ತಿಕ್ಕು |
- |
ಉಜ್ಜು |
- |
ತಿಕ್ಕಿದನು |
|
ತೀಡು |
- |
ಬೀಸು |
- |
ತೀಡಿತು |
|
ತೀರು |
- |
ಮುಗಿ |
- |
ತೀರಿತು |
|
ತೀವು |
- |
ತುಂಬು |
- |
ತೀವಿದೆ |
|
ತುಂಬು |
- |
ತುಂಬುವಿಕೆ |
- |
ತುಂಬಿದೆ |
|
ತುರುಕು |
- |
ಬಿರುಸಿನಿಂದ ಇಡು |
- |
ತುರುಕಿದನು |
|
ತುಡು (ತೊಡು) |
- |
ಧರಿಸು |
- |
ತೊಟ್ಟನು |
|
ತುಳುಕು |
- |
ಹೊರಚೆಲ್ಲು |
- |
ತುಳುಕಿತು |
|
ತುಳಿ |
- |
ಮೆಟ್ಟು |
- |
ತುಳಿದನು |
|
ತುರಿಸು |
- |
ಕೆರೆ |
- |
ತುರಿಸಿದನು |
|
ತುಡುಕು |
- |
ಆತುರದಿಂದ ಹಿಡಿ |
- |
ತುಡುಕಿದನು |
|
ತೂಗು |
- |
ಅಲ್ಲಾಡಿಸು, ಅಳತೆಮಾಡು |
- |
ತೂಗಿದನು |
|
ತೆಗೆ |
- |
ತೆಗೆಯುವಿಕೆ |
- |
ತೆಗೆದನು |
|
ತೆರೆ |
- |
ಕಾಣುವಹಾಗೆ ಮಾಡು |
- |
ತೆರೆದನು |
|
ತೆಗಳು |
- |
ತಿರಸ್ಕರಿಸು |
- |
ತೆಗಳಿದನು |
|
ತೆರು |
- |
ಕೊಡು |
- |
ತೆತ್ತನು |
|
ತೇಗು |
- |
ತೇಗುವಿಕೆ (ತೇಂಕು) |
- |
ತೇಗಿದನು |
|
ತೇಲು |
- |
ತೇಲುವಿಕೆ |
- |
ತೇಲುತ್ತದೆ |
|
ತೊಡು |
- |
ತೊಡುವಿಕೆ, ಧರಿಸುವಿಕೆ |
- |
ತೊಟ್ಟನು |
|
ತೊಡಗು |
- |
ಕಾರ‍್ಯದಲ್ಲಿ ಪ್ರವೃತ್ತನಾಗು |
- |
ತೊಡಗಿದನು |
|
ತೊಳಗು |
- |
ಪ್ರಕಾಶಿಸು |
- |
ತೊಳಗಿತು |
|
ತೊಲಗು |
- |
ದೂರಸರಿ |
- |
ತೊಲಗಿತು |
|
ತೊಡೆ |
- |
ಧರಿಸು, ಹಚ್ಚು |
- |
ತೊಡೆದನು |
|
ತೊಡೆ |
- |
ಸುಗಂಧವನ್ನು ತೊಡೆದನು |
- |
ತೊಡೆದನು |
|
ತೊಯ್ |
- |
ಒದ್ದೆಯಾಗು |
- |
ತೊಯ್ದನು |
|
ತೋರು |
- |
ಕಾಣುವಂತೆ ಮಾಡು |
- |
ತೋರಿದನು |
|
ದಣಿ |
- |
ಆಯಾಸ ಹೊಂದು |
- |
ದಣಿದನು |
|
ದಾಟು |
- |
ಆಚೆ ದಡ ಸೇರು |
- |
ದಾಟಿದನು |
|
ಧುಮುಕು |
- |
ಹಾರಿಕೊಳ್ಳುವಿಕೆ |
- |
ಧುಮುಕಿದನು |
|
ದೊರೆ |
- |
ಸಿಗು |
- |
ದೊರೆಯಿತು |
|
ದೊರಕು |
- |
ಸಿಗು |
- |
ದೊರಕಿತು |
|
ದೋಚು |
- |
ಲೂಟಿಮಾಡು |
- |
ದೋಚಿದನು |
|
ನಡೆ |
- |
ಚಲಿಸುವಿಕೆ |
- |
ನಡೆದನು |
|
ನಡುಗು |
- |
ಕಂಪಿಸು |
- |
ನಡುಗಿತು |
|
ನಂಬು |
- |
ವಿಶ್ವಾಸವಿಡು |
- |
ನಂಬಿದನು |
|
ನಂದು |
- |
ಆರುವಿಕೆ |
- |
ನಂದಿತು |
|
ನಗು |
- |
ನಗುವಿಕೆ |
- |
ನಕ್ಕನು |
|
ನರಳು |
- |
ನರಳುವಿಕೆ |
- |
ನರಳಿದನು |
|
ನಲುಗು |
- |
ಬೇನೆಯಿಂದ ಬತ್ತುವಿಕೆ |
- |
ನಲುಗಿದನು |
|
ನಲಿ |
- |
ಸಂತೋಷಪಡು |
- |
ನಲಿದನು |
|
ನಾಟು |
- |
ಚುಚ್ಚುವುದು |
- |
ನಾಟಿತು |
|
ನಾಚು |
- |
ಲಜ್ಜೆಪಡು |
- |
ನಾಚಿದನು |
|
ನಾರು |
- |
ವಾಸನೆ ಬರುವಿಕೆ |
- |
ನಾರುವುದು |
|
ನಿಲ್ಲು |
- |
ನಿಲ್ಲುವಿಕೆ |
- |
ನಿಂತನು |
|
ನಿಮಿರು |
- |
ಎದ್ದುನಿಲ್ಲುವಿಕೆ |
- |
ಕೂದಲು ನಿಮಿರಿದವು (ಕಿವಿ ನಿಮಿರಿದವು) |
|
ನೀಡು |
- |
ಹಾಕು, ಕೊಡು |
- |
ನೀಡಿದನು |
|
ನೀಗು |
- |
ದೂರವಾಗು |
- |
ನೀಗಿತು |
|
ನುಡಿ |
- |
ಮಾತಾಡು |
- |
ನುಡಿದನು |
|
ನುಂಗು |
- |
ನುಂಗುವಿಕೆ |
- |
ನುಂಗಿದನು |
|
ನುಸುಳು |
- |
ಜಾರಿಹೋಗುವಿಕೆ |
- |
ನುಸುಳಿದನು |
|
ನುರಿ |
- |
ಸಣ್ಣಗೆ ಮಾಡು |
- |
ನುರಿಯಿತು |
|
ನೂಂಕು (ನೂಕು) |
- |
ನೂಕುವಿಕೆ |
- |
ನೂಂಕಿದನು (ನೂಕಿದನು) |
|
ನೂಲು |
- |
ನೂಲುವಿಕೆ |
- |
ನೂತನು |
|
ನೆಗಪು (ನೆಗಹು) |
- |
ಎತ್ತುವಿಕೆ |
- |
ನೆಗಪಿದನು (ನೆಗಹಿದನು) |
|
ನೆಗೆ |
- |
ಹಾರು |
- |
ನೆಗೆದನು |
|
ನೆನೆ |
- |
ಸ್ತೋತ್ರ ಮಾಡು |
- |
ನೆನೆದನು |
|
ನೆಯ್ |
- |
ಬಟ್ಟೆನೇಯುವಿಕೆ |
- |
ನೇಯ್ದನು |
|
ನೆಲಸು |
- |
ಸ್ಥಿರವಾಗಿ ನಿಲ್ಲು |
- |
ನೆಲಸಿದೆ |
|
ನೆರೆ |
- |
ಸೇರು |
- |
ನೆರೆದರು |
|
ನೆಗಳ್ |
- |
ಮಾಡುವಿಕೆ |
- |
ನೆಗಳ್ದನು (ಪ್ರಯತ್ನ ಮಾಡುವಿಕೆ) |
|
ನೋ (ನೋಯ್) |
- |
ನೊಯ್ಯುವಿಕೆ |
- |
ನೊಂದನು |
|
ನೋನ್ (ನೋನು) |
- |
ವ್ರತಮಾಡು |
- |
ನೋಂತನು |
|
ಪಡೆ |
- |
ಹೊಂದು |
- |
ಪಡೆದನು |
|
ಪರಿ |
- |
ಹರಿಯುವಿಕೆ |
- |
ಪರಿದನು |
|
ಹರಿ |
- |
ತುಂಡುಮಾಡುವಿಕೆ |
- |
ಹರಿದನು |
|
ಪರ್ಬು |
- |
ಎಲ್ಲಕಡೆಗೂ ವಿಸ್ತಾರವಾಗು |
- |
ಪರ್ಬು |
|
ಹಬ್ಬು |
- |
ಎಲ್ಲಕಡೆಗೂ ವಿಸ್ತಾರವಾಗು |
- |
ಪಬ್ಬು |
|
ಪಡು |
- |
ಮಲಗುವಿಕೆ |
- |
ಪಟ್ಟನು |
|
ಪತ್ತು (ಹತ್ತು) |
- |
ಏರುವಿಕೆ |
- |
ಪತ್ತಿದನು (ಹತ್ತಿದನು) |
|
ಪರಸು (ಹರಸು) |
- |
ಆಶೀರ್ವಾದ ಮಾಡು, |
- |
ಪರಸಿದನು |
|
ಕೋರು |
(ಹರಸಿದನು) |
|||
|
ಪರಪು (ಹರಹು) |
- |
ಹರಡುವಿಕೆ |
- |
ಪರಪಿದನು |
|
(ಹರಹಿದನು) |
||||
|
ಪವಡಿಸು |
- |
ಮಲಗು |
- |
ಪವಡಿಸಿದನು |
|
ಪಾಸು (ಹಾಸು) |
- |
ಹಾಸುವಿಕೆ |
- |
ಪಾಸಿದನು (ಹಾಸಿದನು) |
|
ಪಾಡು (ಹಾಡು) |
- |
ಹಾಡುವಿಕೆ |
- |
ಪಾಡಿದನು (ಹಾಡಿದನು) |
|
ಪುಗು (ಹೊಗು) (ಹುಗು) |
- |
ಪ್ರವೇಶಿಸುವಿಕೆ |
- |
ಪೊಕ್ಕನು (ಹೊಕ್ಕನು) |
|
ಪುದುಗಿಸು |
- |
ಹುದುಗಿಸುವಿಕೆ |
- |
ಪುದುಗಿಸಿದನು |
|
ಹುದುಗಿಸು |
- |
ಅಡಗಿಸುವಿಕೆ |
- |
ಹುದುಗಿಸಿದನು |
|
ಪೂಣ್ (ಹೂಣ್) |
- |
ಪ್ರತಿಜ್ಞೆಮಾಡು |
- |
ಪೂಣ್ದನು (ಹೂಣ್ದನು) |
|
ಪೂಸು (ಹೂಸು) |
- |
ಲೇಪಿಸು |
- |
ಪೂಸಿದನು (ಹೂಸಿದನು) |
|
ಪೆರ್ಚು |
- |
ಹೆಚ್ಚಾಗುವಿಕೆ |
- |
ಪೆರ್ಚಿತು |
|
ಪೇಳ್ (ಹೇಳು) |
- |
ಹೇಳುವಿಕೆ |
- |
ಪೇಳಿದನು (ಹೇಳಿದನು) (ಪೇಳ್ದನು) |
|
ಪೊರಮಡು |
- |
ಹೊರಬೀಳು |
- |
ಪೊರಮಟ್ಟನು |
|
ಪೊರೆ (ಹೊರೆ) |
- |
ಸಂರಕ್ಷಿಸು |
- |
ಪೊರೆದನು (ಹೊರೆದನು) |
|
ಪೊಳೆ (ಹೊಳೆ) |
- |
ಪ್ರಕಾಶಿಸು |
- |
ಪೊಳೆಯಿತು (ಹೊಳೆಯಿತು) |
|
ಪೊರ್ದು |
- |
ಹೊಂದು |
- |
ಪೊರ್ದಿದನು |
|
ಪೊಸೆ (ಹೊಸೆ) |
- |
ಪೊಸೆಯುವಿಕೆ |
- |
ಪೊಸೆದನು (ಹೊಸೆದನು) |
|
ಪೋರ್ (ಹೋರು) |
- |
ಹೋರಾಡುವಿಕೆ |
- |
ಪೋರ್ದನು (ಹೋರಿದನು) |
|
ಪೋಗು (ಹೋಗು) |
- |
ಹೋಗುವಿಕೆ |
- |
ಪೋದನು (ಹೋದನು) |
|
ಪೇಳ್ (ಪೇಳು) (ಹೇಳು) |
- |
ಹೇಳುವಿಕೆ |
- |
ಪೇಳಿದನು (ಹೇಳಿದನು) |
|
ಪಿಂಗು (ಹಿಂಗು) |
- |
ದೂರವಾಗು |
- |
ಪಿಂಗಿತು (ಹಿಂಗಿತು) |
|
ಪೀರ್ (ಹೀರು) |
- |
ಹೀರುವಿಕೆ |
- |
ಪೀರಿದಂ (ಹೀರಿದನು) |
|
ಬರೆ |
- |
ಬರೆಯುವಿಕೆ |
- |
ಬರೆದನು |
|
ಬಗೆ |
- |
ಚಿಂತಿಸು, ಯೋಚಿಸು |
- |
ಬಗೆದನು |
|
ಬಸಿ |
- |
ತೊಟ್ಟಿಕ್ಕು, ಜಿನುಗು |
- |
ಬಸಿಯಿತು |
|
ಬರು |
- |
ಬರುವಿಕೆ |
- |
ಬಂದನು |
|
ಬದುಕು |
- |
ಜೀವಿಸು |
- |
ಬದುಕಿದನು |
|
ಬಗಿ |
- |
ತೋಡು |
- |
ಬಗಿದನು |
|
ಬಚ್ಚಿಡು |
- |
ಮುಚ್ಚಿಡು |
- |
ಬಚ್ಚಿಟ್ಟನು |
|
ಬತ್ತು |
- |
ಇಂಗು |
- |
ಬತ್ತಿತು |
|
ಬಳಲು |
- |
ಆಯಾಸಗೊಳ್ಳು |
- |
ಬಳಲಿದನು |
|
ಬಳಸು |
- |
ಸುತ್ತಿಬರುವುದು (ವೆಚ್ಚಮಾಡು) |
- |
ಬಳಸಿದನು |
|
ಬಳೆ (ಬೆಳೆ) |
- |
ವೃದ್ಧಿಯಾಗು ಬೆಳೆಯುವಿಕೆ |
- |
ಬಳೆದನು (ಬೆಳೆದನು) |
|
ಬಳುಕು |
- |
ಬಳುಕುವಿಕೆ |
- |
ಬಳುಕಿದಳು |
|
ಬಾಗು |
- |
ಬಾಗುವಿಕೆ |
- |
ಬಾಗಿದನು |
|
ಬಾಡು |
- |
ಬತ್ತುವುದು |
- |
ಬಾಡಿತು |
|
ಬಾಚು |
- |
ಒಟ್ಟುಗೂಡು |
- |
ಬಾಚಿದನು |
|
ಬಾಯ್ವಿಡು (ಬಾಯಿಬಿಡು) |
- |
ಅಳುವಿಕೆ (ಕೂಗುವಿಕೆ) |
- |
ಬಾಯ್ವಿಟ್ಟಳು (ಬಾಯಿಬಿಟ್ಟಳು) |
|
ಬಾಳು |
- |
ಬದುಕುವಿಕೆ |
- |
ಬಾಳಿದನು |
|
ಬಾಸಣಿಸು |
- |
ಮುಚ್ಚು |
- |
ಬಾಸಣಿಸಿದನು |
|
ಬಿಡು |
- |
ತ್ಯಜಿಸು |
- |
ಬಿಟ್ಟನು |
|
ಬಿರಿ |
- |
ಅರಳು, ಸೀಳು |
- |
ಬಿರಿಯಿತು |
|
ಬಿಕ್ಕು |
- |
ಬಿಕ್ಕುವಿಕೆ |
- |
ಬಿಕ್ಕಿದನು |
|
ಬಿಗಿ |
- |
ಬಂಧಿಸು |
- |
ಬಿಗಿದನು |
|
ಬಿತ್ತು |
- |
ಬೀಜಹಾಕು |
- |
ಬಿತ್ತಿದನು |
|
ಬಿಚ್ಚು |
- |
ಕಟ್ಟು ಉಟ್ಟು |
- |
ಬಿಚ್ಚಿದನು |
|
ಬಿಸುಡು |
- |
ಎಸೆಯುವಿಕೆ |
- |
ಬಿಸುಟನು |
|
ಬೀಗು |
- |
ಗರ್ವಪಡು |
- |
ಬೀಗಿದನು |
|
ಬೀಸು |
- |
ಬೀಸುವಿಕೆ (ಎಸೆಯುವಿಕೆ) |
- |
ಒಲೆ ಬೀಸಿದನು |
|
ಬೀಳು |
- |
ನೆಲಕ್ಕೆ ಬೀಳು |
- |
ಬಿದ್ದನು |
|
ಬೆಳಗು |
- |
ಪ್ರಕಾಶಿಸು |
- |
ಬೆಳಗಿತು |
|
ಬೆದರು |
- |
ಅಂಜು |
- |
ಬೆದರಿದನು |
|
ಬೆರಸು |
- |
ಮಿಶ್ರಮಾಡು |
- |
ಬೆರಸಿದನು |
|
ಬೆಸಸು |
- |
ಅಪ್ಪಣೆ ಮಾಡು |
- |
ಬೆಸಸಿದನು |
|
ಬೆಸೆ |
- |
ಜೋಡಿಸು (ಅಂಟಿಸು) |
- |
ಬೆಸೆದನು |
|
ಬೆಂಗೊಳ್ಳು |
- |
ಬೆನ್ನುಹತ್ತು |
- |
ಬೆಂಗೊಂಡನು |
|
ಬೆರ್ಚು (ಬೆಚ್ಚು) |
- |
ಬೆಚ್ಚುಬೀಳುವಿಕೆ |
- |
ಬೆರ್ಚಿದನು (ಬೆಚ್ಚಿದನು) |
|
ಬೇಡು |
- |
ಯಾಚಿಸು |
- |
ಬೇಡಿದನು |
|
ಬೇ |
- |
ಸುಡುವಿಕೆ |
- |
ಬೆಂದಿತು (ಬೆಯ್) |
|
ಬೊಬ್ಬಿರಿ |
- |
ಗಟ್ಟಿಯಾಗಿ ಕೂಗು |
- |
ಬೊಬ್ಬಿರಿದನು |
|
ಮಸಗು |
- |
ವಿಜೃಂಭಿಸು |
- |
ಕೈಕೈಮಸಗಿತು |
|
ಮಡಗು |
- |
ಇಡು |
- |
ಮಡಗಿದನು (ಮಡುಗು) |
|
ಮರುಗು |
- |
ವ್ಯಸನಪಡು |
- |
ಮರುಗಿದನು |
|
ಮಡಿ |
- |
ಸಾಯ್ |
- |
ಮಡಿದನು |
|
ಮರಳು |
- |
ಕುದಿಯುವಿಕೆ |
- |
ಮರಳುತ್ತದೆ |
|
ಮರಳು |
- |
ಹಿಂದಿರುಗು |
- |
ಮರಳಿದನು |
|
ಮರೆ |
- |
ಮರೆಯುವಿಕೆ |
- |
ಮರೆತನು |
|
ಮರಸು |
- |
ಮರೆಯುವಂತೆ ಮಾಡು (ಕಾಣದಂತೆಮಾಡು) |
- |
ಮರೆಸಿದನು |
|
ಮಲೆ |
- |
ಗರ್ವದಿಂದ ಎದುರಿಸಿ ನಿಲ್ಲು |
- |
ಮಲೆತನು |
|
ಮಸೆ |
- |
ತಿಕ್ಕು, ಚೂಪುಗೊಳಿಸು |
- |
ಮಸೆದನು |
|
ಮಾಡು |
- |
ಮಾಡುವಿಕೆ |
- |
ಮಾಡುತ್ತಾನೆ |
|
ಮಾರು |
- |
ಮಾರಾಟಮಾಡುವಿಕೆ |
- |
ಮಾರಿದನು |
|
ಮಾಗು |
- |
ಹಣ್ಣಾಗುವಿಕೆ |
- |
ಮಾಗಿತು |
|
ಮಾಸು |
- |
ಕೊಳೆಯಾಗು |
- |
ಮಾಸಿದೆ |
|
ಮಾಣ್ (ಮಾಣು) |
- |
ಬಿಡುವಿಕೆ ನಿಷೇಧಿಸು, ನಿಲ್ಲಿಸು |
- |
ಮಾಣಲಿ |
|
ಮಾರ್ನುಡಿ |
- |
ಎದುರುಮಾತಾಡು |
- |
ಮಾರ್ನುಡಿದನು |
|
ಮಿಸುಕು |
- |
ಮಿಸುಕುವಿಕೆ |
- |
ನಿದ್ದೆಯಲ್ಲಿ ಮಿಸುಕಿದನು |
|
ಮಿನುಗು |
- |
ಪ್ರಕಾಶಿಸು |
- |
ಮಿನುಗುತ್ತದೆ |
|
ಮಿಕ್ಕು |
- |
ಉಲ್ಲಂಘಿಸು |
- |
ಮಿಕ್ಕಿದನು |
|
ಮಿಂಚು |
- |
ಹೊಳೆಯುವಿಕೆ |
- |
ಮಿಂಚಿತು |
|
ಮಿಡಿ |
- |
ಬೆರಳಿನಿಂದ ಬಾರಿಸು |
- |
ಮಿಡಿದನು |
|
ಮಿದಿ |
- |
ನಾದುವುದು |
- |
ಮಿದಿಯುತ್ತಾನೆ |
|
ಮೀ (ಮೀಯ್) |
- |
ಸ್ನಾನಮಾಡು |
- |
ಮಿಂದನು |
|
ಮೀಂಟು |
- |
ಮುಂದೆತಳ್ಳು |
- |
ಮೀಂಟಿದನು |
|
ಮೀರು |
- |
ಮಿಕ್ಕು |
- |
ಮೀರಿದನು |
|
ಮುಟ್ಟು |
- |
ಮುಟ್ಟುವಿಕೆ, ತಲಪುವಿಕೆ |
- |
ಮುಟ್ಟಿದನು |
|
ಮುಳಿ |
- |
ಸಿಟ್ಟಾಗು |
- |
ಮುಳಿದನು |
|
ಮುಡಿ |
- |
ಧರಿಸು |
- |
ಹೂ ಮುಡಿದಳು |
|
ಮುದುಡು |
- |
ಮುದುಡಿಕೊಳ್ಳುವಿಕೆ |
- |
ಮುದುಡಿಕೊಂಡನು |
|
ಮುಗಿ |
- |
ಮೊಗ್ಗಾಗು, ಕೈಜೋಡಿಸು ತೀರಿಹೋಗು |
- |
ಮುಗಿದನು |
|
ಮುಸುಕು |
- |
ಕವಿಯುವಿಕೆ |
- |
ಹೊಗೆ ಮುಸುಕಿತು |
|
ಮುಕ್ಕುಳಿಸು |
- |
ನೀರು ಮುಕ್ಕುಳಿಸುವಿಕೆ |
- |
ನೀರು ಮುಕ್ಕುಳಿಸಿದನು |
|
ಮುಕ್ಕು |
- |
ತಿನ್ನು, ನುಂಗು |
- |
ಮುಕ್ಕಿದನು |
|
ಮುಗ್ಗು |
- |
ಜೋಲಿಹೋಗು |
- |
ರಾಗಿ ಮುಗ್ಗಿದೆ |
|
- |
ಧಾನ್ಯಗಳು ವಾಸನೆ ಬರುವಿಕೆ |
|||
|
ಮುಗ್ಗರಿಸು |
- |
ಜೋಲಿಹೋಗುವಿಕೆ |
- |
ಮುಗ್ಗರಿಸಿದನು |
|
ಮುರಿ |
- |
ಚೂರು ಮಾಡು |
- |
ಮುರಿದನು |
|
ಮುಳುಗು |
- |
ಕಾಣದಂತಾಗು |
- |
ಮುಳುಗಿತು |
|
ಮೂಡು |
- |
ಹುಟ್ಟು |
- |
ಮೂಡಿತು |
|
ಮೂಸು |
- |
ವಾಸನೆ ತೆಗೆದುಕೊಳ್ಳುವುದು |
- |
ಮೂಸಿದನು |
|
ಮೆರೆ |
- |
ಡಂಭಾಚಾರದಿಂದ ತಿರುಗು |
- |
ಮೆರೆಯುತ್ತಾನೆ |
|
ಮೆಚ್ಚು |
- |
ಒಪ್ಪು, ಪ್ರಸನ್ನನಾಗು |
- |
ಮೆಚ್ಚಿದನು |
|
ಮೆಲ್ಲು |
- |
ತಿನ್ನು |
- |
ಮೆದ್ದನು |
|
ಮೆಟ್ಟು |
- |
ತುಳಿ |
- |
ಮೆಟ್ಟಿದನು |
|
ಮೇ (ಮೇಯ್) |
- |
ಪಶುಗಳು ಆಹಾರ ತಿನ್ನುವಿಕೆ |
- |
ಮೇಯುತ್ತದೆ |
|
ಮೊಳೆ |
- |
ಮೊಳಕೆಯೊಡಯುವಿಕೆ |
- |
ಮೊಳೆಯಿತು |
|
ಮೊಳಗು |
- |
ವಾದ್ಯಗಳು ಧ್ವನಿಮಾಡುವಿಕೆ ಮೇಘಧ್ವನಿ |
- |
ಮೊಳಗಿದವು |
|
ಮೋದು |
- |
ಹೊಡೆಯುವಿಕೆ, ಪ್ರಯೋಗಿಸುವಿಕೆ |
- |
ಗದೆಯಿಂದ ಮೋದಿದನು |
|
ರೇಗು |
- |
ಸಿಟ್ಟಾಗು |
- |
ರೇಗಿದನು |
|
ಸಲಹು |
- |
ಸಂರಕ್ಷಿಸು |
- |
ಸಲಹಿದನು |
|
ಸರಿ |
- |
ಪಕ್ಕಕ್ಕೆ ಹೋಗುವಿಕೆ |
- |
ಸರಿದನು |
|
ಸಂತವಿಡು |
- |
ಸಂತೋಷಪಡಿಸು ಸಂತೈಸುವಿಕೆ |
- |
ಸಂತವಿಟ್ಟನು |
|
ಸವಿ |
- |
ರುಚಿನೋಡು, ತಿನ್ನು |
- |
ಸವಿದನು |
|
ಸಡಿಲು |
- |
ಕಟ್ಟುಸಡಿಲಾಗುವಿಕೆ |
- |
ಸಡಿಲಿದೆ |
|
ಸದೆ |
- |
ಹೊಡೆ, ಬಡಿ |
- |
ಸದೆದನು |
|
ಸಾ (ಸಾಯ್) |
- |
ಮರಣಹೊಂದು |
- |
ಸತ್ತನು |
|
ಸಾಕು |
- |
ರಕ್ಷಿಸು |
- |
ಸಾಕಿದನು |
|
ಸಾರಿಸು |
- |
ಸಾರಣೆ ಮಾಡುವಿಕೆ |
- |
ಸಾರಿಸಿದಳು |
|
ಸಾರು |
- |
ಪ್ರಕಟಪಡಿಸು ಹತ್ತಿರಕ್ಕೆ ಹೋಗು |
- |
ಸಾರಿದರು |
|
ಸಾಗು |
- |
ಹೋಗು, ನಡೆ |
- |
ಸಾಗಿದನು |
|
ಸಿಗು |
- |
ಕೈಸೇರು |
- |
ಸಿಕ್ಕಿತು |
|
ಸೀನ್ (ಸೀನು) |
- |
ಸೀನುವಿಕೆ |
- |
ಸೀತನು |
|
ಸೀಯ್ |
- |
ಸುಡುವಿಕೆ ಕಮರುವಿಕೆ, ಹೊತ್ತುವಿಕೆ |
- |
ಅನ್ನ ಸೀತಿದೆ (ಸೀದಿದೆ) |
|
ಸಿಲುಕು |
- |
ಬಂಧನಕ್ಕೊಳಗಾಗು |
- |
ಸಿಲುಕಿದನು |
|
ಸಿಗು |
- |
ಹಸ್ತಗತವಾಗು |
- |
ಸಿಕ್ಕಿತು |
|
ಸುಗಿ |
- |
ಸುಗಿಯುವಿಕೆ |
- |
ಸುಗಿದನು |
|
ಸುಯ್ |
- |
ಉಸಿರುಬಿಡು |
- |
ಸುಯ್ದನು |
|
ಸುಲಿ |
- |
ಸಿಪ್ಪೆಸುಲಿಯುವಿಕೆ |
- |
ಸುಲಿದನು |
|
ಸುಳಿ |
- |
ತಿರುಗುವಿಕೆ |
- |
ಸುಳಿದನು |
|
ಸೂಸು |
- |
ತುಂಬು |
- |
ಸೂಸಿದೆ |
|
ಸೆಣಸು |
- |
ಯುದ್ಧಮಾಡು |
- |
ಸೆಣಸಿದನು |
|
ಸೆಳೆ |
- |
ಜಗ್ಗು |
- |
ಸೆಳೆದನು |
|
ಸೊಲ್ಲಿಸು |
- |
ಮಾತಾಡುವಿಕೆ |
- |
ಸೊಲ್ಲಿಸಿದನು |
|
ಸೋಲ್ (ಸೋಲು) |
- |
ಅಪಜಯ |
- |
ಸೋತನು |
|
ಹರಡು |
- |
ಹರಡುವಿಕೆ |
- |
ಹರಡಿದನು |
|
ಹವಣಿಸು |
- |
ಅಪೇಕ್ಷಿಸು, ಇಚ್ಚಿಸು ಸಿದ್ಧಪಡಿಸು |
- |
ಹವಣಿಸಿದನು |
|
ಹಂಚು |
- |
ಹಂಚುವಿಕೆ |
- |
ಹಂಚಿದನು |
|
ಹತ್ತು |
- |
ಏರು |
- |
ಹತ್ತಿದನು |
|
ಹನಿ |
- |
ತೊಟ್ಟಿಕ್ಕು |
- |
ಹನಿಯುತ್ತದೆ |
|
ಹನಿಸು |
- |
ಎರೆಯುವಿಕೆ |
- |
ಹನಿಸಿದನು |
|
ಹರಸು |
- |
ಆಶೀರ್ವಾದಮಾಡು |
- |
ಹರಸಿದನು |
|
ಹಿಂಡು |
- |
ಹಿಂಡುವಿಕೆ |
- |
ರಸಹಿಂಡಿದನು ತೊಂದರೆಕೊಡುವಿಕೆ |
|
ಹುರಿ |
- |
ಹುರಿಯುವಿಕೆ |
- |
ಹುರಿದನು |
|
ಹರಿ |
- |
ಹರಿಯುವಿಕೆ |
- |
ಹರಿಯಿತು |
|
ಹಿರಿ |
- |
ಹೊರಗೆಳೆ |
- |
ಹಿರಿದನು |
|
ಹಬ್ಬು |
- |
ವಿಸ್ತಾರವಾಗು |
- |
ಹಬ್ಬಿತು |
|
ಹಳಿ |
- |
ನಿಂದಿಸು |
- |
ಹಳಿದನು |
|
ಹಾರು |
- |
ಜಿಗಿಯುವಿಕೆ, ನೆಗೆಯುವಿಕೆ |
- |
ಹಾರಿದನು |
|
ಹಾರು |
- |
ಎದುರುನೋಡು |
- |
ಹಾರಿದನು |
|
ಹಾಡು |
- |
ಸಂಗೀತ ಹೇಳುವಿಕೆ |
- |
ಹಾಡಿದನು |
|
ಹಿಂಗು |
- |
ನೀಗು, ಬಿಟ್ಟುಬಿಡು |
- |
ಹಿಂಗಿತು |
|
ಹಿಂಜು |
- |
ಹಿಂಜುವಿಕೆ |
- |
ಹತ್ತಿಯನ್ನು ಹಿಂಜಿದನು |
|
ಹಿಸುಕು (ಹಿಚುಕು) |
- |
ಒತ್ತೊವಿಕೆ |
- |
ಹಿಸುಕಿದನು ಹಿಚುಕಿದನು |
|
ಹೀರು |
- |
ಹೀರುವಿಕೆ |
- |
ರಸ ಹೀರಿದನು |
|
ಹುಗಿ |
- |
ನೆಲದಲ್ಲಿ ಮುಚ್ಚು |
- |
ಹುಗಿದನು |
|
ಹೆರು |
- |
ಪ್ರಸವಕ್ರಿಯೆಯಲ್ಲಿ |
- |
ಹೆತ್ತಳು |
|
ಹೆಣಗು |
- |
ಯತ್ನಿಸು |
- |
ಹೆಣಗಿದನು |
|
ಹೇರು |
- |
ಭಾರಹೇರುವಿಕೆ |
- |
ಭಾರಹೇರಿದನು |
|
ಹೇವರಿಸು |
- |
ನಾಚು |
- |
ಹೇವರಿಸಿದನು |
|
ಹೊರೆ |
- |
ರಕ್ಷಣೆಮಾಡು |
- |
ಹೊರೆದನು |
|
ಹೊಂದು |
- |
ಸೇರು, ಪಡೆ |
- |
ಹೊಂದಿದನು |
|
ಹೊಳೆ |
- |
ಪ್ರಕಾಶಿಸು |
- |
ಹೊಳೆಯುತ್ತದೆ |
|
ಹೋರು |
- |
ಯುದ್ಧಮಾಡು |
- |
ಹೋರಿದನು |
|
ಜಗಳವಾಡು |
||||
|
ಹೋಲು |
- |
ಸಮನಾಗು ಹೋಲಿಕೆಯಲ್ಲಿ |
- |
ಹೋಲುತ್ತಾನೆ |

0 Comments