ದ್ವಿತೀಯ ಪಿಯುಸಿ ಇತಿಹಾಸ.
1) ಮಹಾಭಾಷ್ಯ ಕೃತಿಯ ಕರ್ತೃ ಯಾರು?
* ಪಾಣಿನಿ.
2) ಜೈನ ಧರ್ಮದ ಎರಡು ಧಾರ್ಮಿಕ ಗ್ರಂಥಗಳು ಯಾವುವು?
* ಅಂಗ ಮತ್ತು ಉಪಾಂಗ.
3) "ಶಿಲಪ್ಪಾದಿಗಾರಂ" ಯಾವ ಭಾಷೆಯಲ್ಲಿದೆ?
* ತಮಿಳು.
4) "ಕರುನಾಡರ್" ಎಂದು ಉಲ್ಲೇಖವಿರುವುದು ಯಾವ ಗ್ರಂಥದಲ್ಲಿ?
* ಶಿಲಪ್ಪಾದಿಗಾರಂ.
5) ನಾಣ್ಯಶಾಸ್ತ್ರ ಎಂದರೆ ......
* ನಾಣ್ಯಗಳ ಅಧ್ಯಯನ.
6) ಶಾಸನಗಳ ಅಧ್ಯಯನವೇ ....
* ಶಾಸನಶಾಸ್ತ್ರ.
7) ರವಿಕಿರ್ತಿ ರಚಿಸಿದ ಶಾಸನ ಯಾವುದು?
* ಐಹೊಳೆ ಶಾಸನ.
8) ಬಾರ್ಬೋಸಾ ಯಾವ ದೇಶದವನು?
* ಪ್ರೋರ್ಚಗಲ್.
9) "ಜಿಯಾಗ್ರಫಿ" ಗ್ರಂಥ ಕರ್ತೃ ಯಾರು?
* ಟಾಲಮಿ.
10) ಪ್ಯಾಲಿಯೋಲಿಥಿಕ್ ಏಜ್ ಎಂದರೆ .........
* ಹಳೆಯ ಶಿಲಾಯುಗ.
11) ಯಾವ ಭಾಷೆಯಲ್ಲಿ ಮಹೆಂಜೊದಾರೋ ಅಂದರೆ ಸತ್ತವರ ದಿಬ್ಬ?
* ಸಿಂಧೀ.
12) "ಅಂಲಗೀರ್ ಪುರ" ಯಾವ ರಾಜ್ಯದಲ್ಲಿದೆ?
* ಉತ್ತರಪ್ರದೇಶ.
13) ಆರ್ಯರು ಟಿಬೆಟ್ ಮೂಲದವರು ಎಂದವರು ಯಾರು?
* ಸ್ವಾಮಿ ದಯಾನಂದ ಸರಸ್ವತಿ.
14) ವಿದ್ ಎಂದರೆ .....
* ಜ್ಞಾನ ಎಂದರ್ಥ.
15) ಋಗ್ವೇದದ ಕಾಲದಲ್ಲಿ ಆರ್ಯರು ಎಲ್ಲಿ ವಾಸಿಸುತ್ತಿದ್ದರು?
* ಹಳ್ಳಿಗಳಲ್ಲಿ.
16) ಜೈನ ಧರ್ಮದ ಪವಿತ್ರ ಚಿಹ್ನೆ ಯಾವುದು?
* ಸ್ವಸ್ತಿಕ್.
17) ಆಸ್ತೆಯ ಎಂದರೆ .......
* ಕಳ್ಳತನ ಮಾಡದಿರುವುದು.
18) ಬೌದ್ಧ ಧರ್ಮದ ಸ್ಥಾಪಕ ಯಾರು?
* ಗೌತಮ ಬುದ್ಧ.
19) ದಿಗಂಬರರು ಎಂದರೆ ಯಾರು?
* ಮಹಾವೀರನ ಅನುಯಾಯಿಗಳು.(ನಿರ್ವಸ್ತ್ರಧಾರಿಗಳು).
20) ಬುದ್ಧನನ್ನು ಏಷಿಯಾದ ಬೆಳಕು ಎಂದು ಕರೆದವರು ಯಾರು?
* ಎಡ್ವಿನ್ ಅರ್ನಾಲ್ಡ್.
21) 3 ನೇ ಬೌದ್ಧ ಸಮ್ಮೇಳನ ನಡೆದ ಸ್ಥಳ ಯಾವುದು?
* ಪಾಟಲೀಪುತ್ರ.
22) ದೀಪವಂಶ ಮತ್ತು ಮಹಾವಂಶ ಎನ್ನುವವು .....
* ಸಿಲೋನಿನ ಕೃತಿಗಳು.
23) ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗರಾಮೇಶ್ವರ ಯಾವ ಜಿಲ್ಲೆಯಲ್ಲಿವೆ?
* ಚಿತ್ರದುರ್ಗ.
24) ಮೆಗಾಸ್ಥನಿಸ್ ಯಾವ ದೇಶದ ರಾಯಭಾರಿ?
* ಗ್ರೀಕ್.
25) "ಗಾಥಸಪ್ತಸತಿ" ಎಂಬ ಕೃತಿಯನ್ನು ರಚಿಸಿದವನು ಯಾರು?
* ಹಾಲ.
26) ಗಾಥಸಪ್ತಸತಿ ಯಾವ ಭಾಷೆಯಲ್ಲಿದೆ?
* ಪ್ರಾಕೃತ.
27) ಹಾಲ ಶಾತವಾಹನರ ಎಷ್ಟನೇ ದೊರೆ?
* 17 ನೇ.
28) ಕುಶಾನರ ಅತ್ಯಂತ ಶ್ರೇಷ್ಠ ದೊರೆ ಯಾರು?
* ಕಾನಿಷ್ಕ.
29) ಕಾನಿಷ್ಕನ ರಾಜಧಾನಿ ಯಾವುದಾಗಿತ್ತು?
* ಪುರುಷಪುರ.
30) ಪುರುಷಪುರದ ಇಂದಿನ ಹೆಸರೇನು?
* ಪೇಷಾವರ.
31) ಗಾಂಧಾರ ಎಂಬ ಸ್ಥಳ ಯಾವ ರಾಷ್ಟ್ರದಲ್ಲಿದೆ?
* ಆಪ್ಘಾನಿಸ್ತಾನ.
32) ದೇವಿಚಂದ್ರ ಗುಪ್ತಂ ಕೃತಿಯ ಕರ್ತೃ ಯಾರು?
* ವಿಶಾಖದತ್ತ.
33) ಸಮುದ್ರ ಗುಪ್ತ ಯಾವ ಸಂತತಿಯ ದೊರೆ?
* ಗುಪ್ತ.
34) ಸಮುದ್ರಗುಪ್ತನ ದಂಡನಾಯಕ ಯಾರು?
* ಹರಿಸೇನ.
35) ಹರಿಸೇನ ಯಾರ ಆಸ್ಥಾನದ ಕವಿ?
* ಸಮುದ್ರಗುಪ್ತ.
36) ಅಸ್ಸಾಂನ ಹಳೆಯ ಹೆಸರೇನು?
* ಕಾಮರೂಪ.
37) ಫಾಹಿಯಾನ ಒಬ್ಬ ------ ಯಾತ್ರಿಕ.
* ಚೀನಾ.
38) ಅಮರಕೋಶ ಕೃತಿಯ ಕರ್ತೃ ಯಾರು?
* ಅಮರಸಿಂಹ.
39) ಮಧುರೈ ಪಾಂಡ್ಯರು ಯಾವ ಸಾಹಿತ್ಯವನ್ನು ಪೋಷಿಸಿದರು?
* ಸಂಘಂ ಸಾಹಿತ್ಯ.
40) ತಕ್ಕೋಳಂ ಕಾಳಗ ನಡೆದದ್ದು ಯಾವಾಗ?
* ಸಾ.ಶ. 949 ರಲ್ಲಿ.
41) ತಕ್ಕೋಳಂ ಕಾಳಗ ಯಾರ ಯಾರ ನಡುವೆ ನಡೆಯಿತು?
* ಚೋಳರು ಮತ್ತು ರಾಷ್ಟ್ರಕೂಟರು.
42) ರಾಜರಾಜೇಶ್ವರ ದೇವಾಲಯ ಎಲ್ಲಿದೆ?
* ತಂಜಾವೂರಿನಲ್ಲಿದೆ.
43) ರಾಜರಾಜೇಶ್ವರ ದೇವಾಲಯದ ಮತ್ತೊಂದು ಹೆಸರೇನು?
* ಬೃಹದೇಶ್ವರ.
44) ರಾಜರಾಜೇಶ್ವರ ದೇವಾಲಯ ಕಟ್ಟಿಸಿದವನು ಯಾರು?
* ಒಂದನೇ ರಾಜರಾಜಚೋಳ.
45) ರಾಜರಾಜೇಶ್ವರ ದೇವಾಲಯವನ್ನು ಒಂದನೇ ರಾಜರಾಜಚೋಳ ಕಟ್ಟಿಸಿದ್ದು ಯಾವಾಗ?
* ಸಾ.ಶ. 1009 ರಲ್ಲಿ.
0 Comments