ಭಾರತದಲ್ಲಿ ಮಳೆಯ ಹಂಚಿಕೆ

*ಭಾರತದಲ್ಲಿ ಮಳೆಯ ಹಂಚಿಕೆ*

ಭಾರತದಲ್ಲಿ ಸಾಮಾನ್ಯವಾಗಿ ನೈಋತ್ಯ ಮಾನ್ಸೂನ್ ಮಾರುತಗಳ ಕಾಲದಲ್ಲಿ ಮಳೆಯಾಗುತ್ತದೆ.

ದೇಶದ ಸರಾಸರಿ ಮಳೆಯ ಪ್ರಮಾಣ 118 ಸೆಂ.ಮೀ ಗಳು. ಮಳೆಯ ಹಂಚಿಕೆಯ ಆಧಾರದ ಮೇಲೆ ಭಾರತವನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಬಹುದು. ಅವುಗಳೆಂದರೇ - 

*1) ಕಡಿಮೆ ಮಳೆಯ ಪ್ರದೇಶ:-*

# ಈ ಪ್ರದೇಶದಲ್ಲಿ ಸುಮಾರು 50 ಸೆಂ.ಮೀ ಗಳಿಗಿಂತ ಕಡಿಮೆ ಮಳೆ ಬೀಳುತ್ತದೆ. 

# ರಾಜಸ್ಥಾನದ ಥಾರ ಮರುಭೂಮಿ, ಪಂಜಾಬ, ಹರಿಯಾಣ, ಗುಜರಾತಿನ ಕಛ್ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರದ ಪೂರ್ವಭಾಗ, ಕರ್ನಾಟಕದ ಒಳನಾಡು ಕಡಿಮೆ ಮಳೆ ಬೀಳುವ ವಲಯವಾಗಿದೆ.

# ರಾಜಸ್ಥಾನದ ಜೈಸಲ್ಮೇರ ಜಿಲ್ಲೆಯ "ರೂಯ್ಲಿ" ಯು ವಾರ್ಷಿಕ ಸರಾಸರಿ ಮಳೆಯ 8.3 ಸೆಂ.ಮೀ ಗಳಷ್ಟಾಗಿದೆ. ಇದು ಭಾರತದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಪ್ರದೇಶವಾಗಿದೆ.

*2) ಸಾಧಾರಣ ಮಳೆ ಪಡೆಯುವ ಪ್ರದೇಶ:-*

#ಈ ಪ್ರದೇಶದಲ್ಲಿ ಸುಮಾರು 50 ರಿಂದ 250 ಸೆಂ.ಮೀ ಮಳೆ ಬೀಲುತ್ತದೆ.

#ಈ ಭಾಗಗಳನ್ನು ಅತಿ ಕಡಿಮೆ ಹಾಗೂ ಅತಿ ಹೆಚ್ಚು ಮಳೆಯ ಪ್ರದೇಶಗಳನ್ನು ಬಿಟ್ಟು ಭಾರತದ ಉಳಿದೆಲ್ಲ ಭಾಗಗಳನ್ನು ಒಳಗೊಂಡಿದೆ.

*3) ಅಧಿಕ ಮಳೆಯ ಪ್ರದೇಶ:-*

# ಸುಮಾರು 250 ಸೆಂ.ಮೀ ಗಳಿಗಿಂತ ಹೆಚ್ಚು ಮಳೆ ಬೀಳುವ ಭಾಗಗಳನ್ನು ಅಧಿಕ ಮಳೆ ಬೀಳುವ ಪ್ರದೇಶಗಳೆಂದು ಗುರುತಿಸುತ್ತೇವೆ. 

# ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗ, ಅಸ್ಸಾಂ ಹಾಗೂ ಇತರೆ ಪೂರ್ವ ರಾಜ್ಯಗಳು, ಹಾಗೂ ಪಶ್ಚಿಮ ಬಂಗಾಳ ಈ ವಲಯದಲ್ಲಿ ಸೇರುತ್ತವೆ. 

# ಮೇಘಾಲಯದ *"ಮೌಸಿನ್ ರಾಮ್"* ದೇಶದಲ್ಲಿಯೇ ಅತ್ಯಧಿಕ ಮಳೆ ಪಡೆಯುವ ಪ್ರದೇಶವಾಗಿದೆ. ಇದು ಪ್ರಪಂಚದಲ್ಲಿಯೇ ಅತಿ ಹೆಚ್ಚು ಮಳೆಯನ್ನು ದಾಖಲಿಸಿದೆ.

# ನೈರುತ್ಯ ಮಾನ್ಸೂನ್ ಮಾರುತಗಳು ಭಾರತದ ವ್ಯವಸಾಯವನ್ನು ನಿಯಂತ್ರಿಸುತ್ತವೆ. ಈ ಮಳೆ ವಿಫಲವಾದರೆ ಬರಗಾಲ ಬರುವುದು. ಅತಿ ಹೆಚ್ಚಾದಾಗ ಪ್ರವಾಹ ಉಂಟಾಗಿ ಪ್ರಾಣ ಹಾನಿ ಮತ್ತು ಆಸ್ತಿ - ಪಾಸ್ತಿಗಳಿಗೆ ಹಾನಿಯುಂಟಾಗುವುದು. ಆದ್ದರಿಂದ ಭಾರತದ ವ್ಯವಸಾಯವನ್ನು ಮನ್ಸೂನ್ ಜೊತೆಯಲ್ಲಿ ಆಡುವ ಜೂಜಾಟ ಎಂದು ಕರೆಯುತ್ತಾರೆ.

Post a Comment

1 Comments

  1. Bharatadalli ati kadime male biluv pradesha Maharashtrada mahabaleshwar

    ReplyDelete